೨೦/೩/೧೦೧೨ : ಈ ದಿನ ಅರಿವುಗೆ ಡಾ|| ಮನಿಕರ್ಣಿಕ ಮತ್ತು ಅವರ ವಿಧ್ಯಾರ್ಥಿಗಳು ಭೇಟಿ ಕೊಟ್ಟಿದ್ದರು.
ಆಕರ್ಷಕ 'ಅರಿವು ಹಬ್ಬ : ಮಕ್ಕಳು ಹಾಗು ಪೋಷಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ - ವಿಶೇಷ ವರದಿ
ಅರಿವು ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಸಮಾಜ, ಸಂಸ್ಕೃತಿ, ಶಿಕ್ಷಣ ಇವುಗಳ ಬಗ್ಗೆ ಅತೀವ ಕಳಕಳಿಯುಳ್ಳ ಸಮಾನ ಮನಸ್ಕರು ಕೈ ಜೋಡಿಸಿ ಅರಿವು ಟ್ರಸ್ಟ್ ಆರಂಭಿಸಿದ್ದೇವೆ. ಮಕ್ಕಳ ಸರ್ವತೋಮುಖ ಬೆಳೆಯುವಿಕೆಯೇ "ಅರಿವು" ಟ್ರಸ್ಟ್ ನ ಪ್ರಮುಖ ಗುರಿ. ಚಾರಿತ್ರ್ಯವಂತ ವ್ಯಕ್ತಿಗಳಿಂದ ಮಾತ್ರ ಒಂದು ಉತ್ತಮ ಸಮಾಜ, ಬದುಕು ಸಾಧ್ಯ. ಅಂತಹ ಒಂದು ಸಮಾಜದ ನಿರ್ಮಾಣಕ್ಕೆ ಒಂದು ಪುಟ್ಟ-ದಿಟ್ಟ ಪ್ರಯತ್ನ ಅರಿವು ಸದಸ್ಯರಿಂದ ನಡೆದಿದೆ. ಪರಿಪೂರ್ಣ ಶಿಕ್ಷಣ, ಪರಿಸರ - ಜೀವ ಸಂಕುಲ, ಸೌಖ್ಯ-ಸ್ವಾಸ್ಥ್ಯ ಜೀವನ, ಸಮಷ್ಟಿ ಜೀವನ ಇವುಗಳೆಲ್ಲ ಒಂದು ಸುಂದರ ಸಮಾಜಕ್ಕೆ, ಬದುಕಿಗೆ ಅತೀ ಅವಶ್ಯಕವಾದ್ದರಿಂದ ಇವುಗಳೆಲ್ಲದರ ಬಗ್ಗೆಯೂ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಶಿಕ್ಷಣದಲ್ಲಿ ಉಳಿದ ಮೂರು ವಿಷಯಗಳು ಅಡಕವಾಗಿದ್ದಾಗ ಅದು ಪರಿಪೂರ್ಣ ಶಿಕ್ಷಣವಾಗುತ್ತದೆ ಮತ್ತು ನಮ್ಮ ಮುಂದಿನ ಪೀಳಿಗೆಗಳಿಗೆ ನಾವು ಒಳ್ಳೆಯ ಸಮಾಜ ಅದರಿಂದ ಒಳ್ಳೆಯ ಬದುಕನ್ನು ಕಟ್ಟಿಕೊಡಲಿದ್ದೇವೆ.
ಅರಿವು ತನ್ನ ಬಹಳಷ್ಟು ಕೆಲಸಗಳಿಗೆ ಲಿಂಗಾಬುಧಿಕೆರೆಯ ಸುತ್ತಲಿನ ಸುಂದರ ಪರಿಸರವನ್ನು ಆಯ್ದು ಕೊಂಡಿದೆ.